ರಾಷ್ಟ್ರೀಯ ಯುವ ದಿನ ಮತ್ತು ರಾಷ್ಟ್ರೀಯ ಯುವ ಸಪ್ತಾಹ 2022 ಸಮಾರೋಪ ಸಮಾರಂಭ

 ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ಯುವ ಜನತೆ ಇನ್ನಷ್ಟು ಜೀವನದಲ್ಲಿ ನವ ಚೇತನವನ್ನು ಅಳವಡಿಸಿಕೊಂಡು ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ವಿಷಯಾಧಾರಿತ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಜೇಸಿ ಸಂಸ್ಥೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜೇಸಿ ಕುಂದಾಪುರ ಸಿಟಿಯ ಅಧ್ಯಕ್ಷ ಅಭಿಲಾಷ ಬಿ.ಎ ಹೇಳಿದರು.   



ಅವರು ಜೇಸಿ ಕುಂದಾಪುರ ಸಿಟಿಯ ಸಹಬಾಗಿತ್ವದಲ್ಲಿ ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜರುಗಿದ  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ೧ ಮತ್ತು ೨ ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ದಿನ ಮತ್ತು ರಾಷ್ಟ್ರೀಯ ಯುವ ಸಪ್ತಾಹ ೨೦೨೨ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. 

ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿದ್ಧರು. ಐಕ್ಯೂಎಸಿ ಸಂಚಾಲಕ ನಾಗರಾಜ ಯು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಸಂತೋಷ ನಾಯ್ಕ ಹೆಚ್. ಉಪಸ್ಥಿತರಿದ್ಧರು.   

ಇದೇ ಸಂದರ್ಭ ಜೇಸಿಯ ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ ಇವರ ಥಿಂಕ್ ಬಿಗ್ ಎಂಡ್ ಗ್ರೋ ಬಿಗ್ ಎಂಬ ಶೀರ್ಷಿಕೆಯಡಿಯಲ್ಲಿನ ತರಬೇತಿ ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ಯುವ ಸಪ್ತಾಹದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.  

ಪ್ರತೀಕ್ಷಾ ಮತ್ತು ದಿಪೀಕಾ ಪ್ರಾರ್ಥಿಸಿದರು. ದ್ವೀತಿಯ ಬಿ.ಕಾಂ ವಿದ್ಯಾರ್ಥಿ ಜಯಕರ ಸ್ವಾಗತಿಸಿದರು.  ಜೇಸಿ ಕುಂದಾಪುರ ಸಿಟಿಯ ಕಾರ್ಯದರ್ಶಿ ಜೇಸಿ ಹುಸೇನ್ ಹೈಕಾಡಿ ಪ್ರಾಸ್ತಾವಿಕ ಮಾತನಾಡಿದರು. ಗ್ರಂಥಪಾಲಕ ರವಿಚಂದ್ರ ಹೆಚ್.ಎಸ್ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ದ್ವೀತಿಯ ಬಿಕಾಂ ವಿದ್ಯಾರ್ಥಿ ಗಣೇಶ ಬಿ.ಎ   ಕಾರ್ಯಕ್ರಮ ನಿರೂಪಿಸಿದರು. ದ್ವೀತಿಯ ಬಿಬಿಎ ವಿದ್ಯಾರ್ಥಿ ರಶ್ಮಿತಾ ವಂದಿಸಿದರು.