ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಉಡುಪಿ,ಫೆ.1: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಸಂಸ್ಥೆಗಳ 2 ಮತ್ತು 10 ಹೊಸ ಅಧಿಸೂಚಿತ ಸಂಸ್ಥೆ ಹಾಗೂ ದೇವಸ್ಥಾನಗಳಿಗೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಅರ್ಹ ಭಕ್ತಾಧಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.



ಪ್ರವರ್ಗ ಸಿ ಸಂಸ್ಥೆಗಳು: ಬ್ರಹ್ಮಾವರ ತಾಲೂಕು ಕೆಂಜೂರು ಶ್ರೀ ವೀರೇಶ್ವರ ದೇವಸ್ಥಾನ, ಹಾರ್ಡಳ್ಳಿ ಮಂಡಳ್ಳಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ ಹಾಗೂ ಉಡುಪಿ ತಾಲೂಕಿನ ಹೆರ್ಗ ಅಗ್ರಹಾರ ವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನ ಮತ್ತು ಉದ್ಯಾವರ ಶ್ರೀ ಪಿತ್ರೋಡಿ ಗೋಪಾಲಕೃಷ್ಣ ದೇವಸ್ಥಾನ.

ಹೊಸ ಅಧಿಸೂಚಿತ ಸಂಸ್ಥೆಗಳು: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಶ್ರೀ ಸೋಮೇಶ್ವರ ದೇವಸ್ಥಾನ, ಚಿತ್ರಪಾಡಿ ಶ್ರೀ ಪುಟ್ಟನಕಟ್ಟೆ ವಿನಾಯಕ ದೇವಸ್ಥಾನ ಹಾಗೂ ಗಿಳಿಯಾರು ಶ್ರೀ ಶಂಕರನಾರಾಯಣ ದೇವಸ್ಥಾನ, ಕುಂದಾಪುರ ತಾಲೂಕಿನ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಸ್ರೂರು ಶ್ರೀ ಆಧಿನಾಥೇಶ್ವರ ದೇವಸ್ಥಾನ ಹಾಗೂ ಜಪ್ತಿ ಶ್ರೀ ಜಂಬುಕೇಶ್ವರ ದೇವಸ್ಥಾನ, ಬೈಂದೂರು ತಾಲೂಕು ಹೇರೂರು ಶ್ರೀ ಹುಂತಿನ ಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಕಂಬದಕೋಣೆ ಶ್ರೀ ಕೊಕ್ಕೇಶ್ವರ ದೇವಸ್ಥಾನ, ಹೆಬ್ರಿ ತಾಲೂಕು ಅಲ್ಬಾಡಿ ಆರ್ಡಿ ಕೊಂಜಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಕೆರೆಬೆಟ್ಟು ಶ್ರೀ ಬಂಡಿಕಲ್ಲು ಕೋಟೆನಾಥ ದೇವಸ್ಥಾನ. 

ಅರ್ಜಿ ಸಲ್ಲಿಸಲು ಮಾರ್ಚ್ 3 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ರಜತಾದ್ರಿ, ಮಣಿಪಾಲ  ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.