ಕುಂದಾಪುರದಲ್ಲಿ ಜೈಲ್ ಭರೋ ಚಳವಳಿ. ರಸ್ತೆ ತಡೆದು ಪ್ರತಿಭಟಿಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು.


 
* ರಸ್ತೆ ತಡೆದು ಪ್ರತಿಭಟಿಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು.

* ಬಿಜೆಪಿ ನಾಯಕರ ಬಂಧನ- ಬಿಡುಗಡೆ
ಕುಂದಾಪುರ: ಕೇಂದ್ರ ಸರಕಾರದ ತಪ್ಪು ಆಥರ್ಿಕ ನೀತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ದರ ಏರಿಕೆ ಸೇರಿದಂತೆ ಹತ್ತು ಹಲವು ಜನ ವಿರೋದಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾಟರ್ಿಯು  ದಿನಾಂಕ 22.ರಂದು ದೇಶವ್ಯಾಪಿ ಕರೆಕೊಟ್ಟಿದ್ದ ಜೈಲ್ ಭರೋ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಮುಖಂಡರು ಮತ್ತು ಬಿ.ಜೆ.ಪಿ ಕಾರ್ಯಕರ್ತರು ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ
`` ಕಾಂಗ್ರೆಸ್ ಸರಕಾರ ಜನಸಾಮಾನ್ಯರ ಓಟುಗಳನ್ನು ಗಳಿಸಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಕೋಟ್ಯಾಂತರ ಮಂದಿ ಜನಸಾಮಾನ್ಯರ ಭಾವನೆಗಳನ್ನು ನೋಯಿಸಿ ಅಗತ್ಯ ವಸ್ತುಗಳ ಬೆಲೆಯನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿದೆ.ಹಲವಾರು ಹಗರಣಗಳನ್ನು ನಡೆಸುತ್ತಾ ಆಡಳಿತ ನಡೆಸುತ್ತಿದೆ.ಆದರೂ ಜನರು ಕಾಂಗ್ರೆಸ್ ಗೆ ಮತ ಹಾಕಿ ಜಯಶಾಲಿಯನ್ನಾಗಿ ಮಾಡುತ್ತಿದ್ದಾರೆ, ಆದರೆ ಓಟಿಗೆ ಬೆಲೆ ಏರಿಕೆಯೆಂಬ ಇನಾಮನ್ನು ಕೇಂದ್ರ ಸರಕಾರ ಜನಸಾಮನ್ಯರಿಗೆ ಕೊಡುತ್ತಿದೆ.ಎಂದು ವ್ಯಂಗ್ಯವಾಡಿದರು.ಇವರ ಈ ನೀತಿಯನ್ನು ವಿರೋಧಿಸಿ ನಾವಿಂದು ಜೈಲ್ ಭರೋ ಚಳುವಳಿಯನ್ನು ಹಮ್ಮಿಕೊಂಡಿದ್ದು ಜನಸಾಮಾನ್ಯರ,ಕಾರ್ಯಕರ್ತರ ಬೆಂಬಲ ನಮಗೆ ಬೇಕಾಗಿದೆ, ಹಾಗಾದಲ್ಲಿ ಮಾತ್ರ ಮುಂಬರುವ ದಿನಗಳಲ್ಲಿ ಯು.ಪಿ.ಎ. ಸರಕಾರವನ್ನು ಕಿತ್ತೊಗೆಯಲು ಸಾಧ್ಯವಾಗುತ್ತದೆ''. ಎಂದೂ ಕಾಂಗ್ರೇಸ್ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.  

 ರಸ್ತೆ ತಡೆ ಮಾಡಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ,ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಬಿ. ಕಿಶೋರ್ ಕುಮಾರ್,  ಪ್ರಧಾನ ಕಾರ್ಯದಶರ್ಿ ಶರಶ್ಚಂದ್ರ ಹೆಗ್ಡೆ, ರಾಜೇಶ್ ಕಾವೇರಿ,  ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶೆಣೈ,  ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ.ಶ್ರೀಯಾನ್, ಪ್ರಕಾಶ್ ಮೆಂಡನ್, ಯುವ ಮೋರ್ಚ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮಹಿಳಾ ಮೋರ್ಚ ಅಧ್ಯಕ್ಷೆ ಜಾನಕಿ ಬಿಲ್ಲವ ಮತ್ತು ಸದಸ್ಯರು,  ತಾಲೂಕು ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಬಿ.ಜೆ.ಪಿ. ಹಿರಿಯ ನಾಯಕರು ಮತ್ತು ಕಾರ್ಯಕರ್ತರು , ಬಜರಂಗದಳ ಜಿಲ್ಲಾ ಸಂಚಾರಕ ಗಿರೀಶ್ ಕುಂದಾಪುರ, ಬಿ.ಎಮ್. ಎಸ್. ಅಧ್ಯಕ್ಷ ಕೆ.ಟಿ. ಸತೀಶ್. ಉಪಸ್ತಿತರಿದ್ದರು.
                                                                                                          ಚಿತ್ರ ವರದಿ: ಯೋಗೀಶ್ ಕುಂಭಾಸಿ


                                     ನಿಮ್ಮ ಪ್ರತಿಕ್ರಿಯೆ ಬರೆಯಿರಿ
 
ಕುಂದಾಪ್ರ.ಕಾಂ> editor@kundapra.com