ಘರ್ ಘರ್ ಕೊಂಕಣಿ ಕಾರ್ಯಕ್ರಮ

ಕುಂದಾಪುರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ವೈಶ್ಯ ಸಮಾಜ ಸಹಯೋಗದೊಂದಿಗೆ ಇಲ್ಲಿನ ತೇಜಸ್ವಿನಿ ಮನೆ ವಠಾರದಲ್ಲಿ ಘರ್ ಘರ್ ಕೊಂಕಣಿ ( ಮನೆ ಮನೆ ಕೊಂಕಣಿ) ಕಾರ್ಯಕ್ರಮ ಜರುಗಿತು.
     ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಕೊಂಕಣಿ ಭಾಷೆ ಮಾತನಾಡುವ ವೈಶ್ಯ ಸಮಾಜ ಅಕಾಡೆಮಿಯಲ್ಲಾಗಲಿ, ಸರಕಾರದಲ್ಲಾಗಲಿ ಯಾವುದೇ ಮಾನ್ಯತೆ ಹೊಂದಿಲ್ಲದಿರುವುದು ದುರದೃಷ್ಟ.
ಅಕಾಡೆಮಿ ಅಧ್ಯಕ್ಷನಾಗಿರಲಿ, ಇಲ್ಲದಿರಲಿ ವೈಶ್ಯಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವಿರತ ಹೋರಾಟ ನಡೆಸುವುದಾಗಿ ಚಿನ್ನಾ ಹೇಳಿದ್ದಾರೆ.

       ಕರ್ನಾಟಕ ಕೊಂಕಣಿ ಅಕಾಡೆಮಿ ಸದಸ್ಯ ಓಂಗಣೇಶ್, ಕರ್ನಾಟಕ ಕೊಂಕಣಿ ಅಕಾಡೆಮಿ ಮಾಜಿ ಸದಸ್ಯ ಯು.ಎಸ್.ಶೆಣೈ, ಮುಖ್ಯ ಅತಿಥಿ ಕುಂದಾಪುರ ತಾಲೂಕು ವೈಶ್ಯವಾಣಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ಶೇಟ್ ಸುರತ್ಕಲ್ ಶುಭಾಶಂಸನೆ ನೀಡಿದರು. ವೈಶ್ಯ ಸಮಾಜದ ಸಾಧಕರಾದ ಅಚ್ಯುತ್ ಶೇಟ್ ಕೋಟೇಶ್ವರ ಹಾಗೂ ತ್ರಿವಿಕ್ರಮ್‌ರಾವ್ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಘಟಕ ಎಂ.ದಯಾನಂದರಾವ್ ಸ್ವಾಗತಿಸಿದರು. ಪದ್ಮನಾಭ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.