ಕುಂದಾಪುರದಲ್ಲಿ 'ಫನ್ ವಿತ್ ಶೈನ್'

   ಫನ್ ವಿತ್ ಶೈನ್ ಕಾರ್ಯಕ್ರಮದಕ್ಕೆ ಬನ್ನಿ.  ವಿಕೆಂಡ್ ನ  ನಿಮ್ಮ ಕುಂಟುಂಬದೊಂದಿಗೆ ಎಂಜಾಯ್ ಮಾಡಿ
    ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ 'ಫನ್ ವಿತ್ ಶೈನ್' ಎಂಬ ವಿನೂತನ ಮನೊರಂಜನಾತ್ಮಕ ಕಾರ್ಯಕ್ರಮ ಎಪ್ರಿಲ್ 11ರ ಸಂಜೆ ನಡೆಯಲಿದೆ. ಕುಂದಾಪುರದ ಕೋಣಿ ಮೂರುಕೈನ ಆಶಿರ್ವಾದ್ ಹಾಲಿನಲ್ಲಿ ಸಂಜೆ 6ಗಂಟೆಯಿಂದ 10ಗಂಟೆಯ ತನಕ ನಡೆಯಲಿರುವ ಈ ಕೌಟುಂಬಿಕ ಮನೋರಂಜನಾ ಕಾರ್ಯಕ್ರಮವನ್ನು ನಟ ಶೈನ್ ಶೆಟ್ಟಿ ನಡೆಸಿಕೊಡಲಿದ್ದಾರೆ. ಕುಂದಾಪುರ ಡಿ.ಜೆ. ರಂಜು ಅವರ ರಂಜು ಇವೆಂಟ್ ಮೂಲಕ ಆಯೋಜಿಸಲಾಗಿರುವ 'ಫನ್ ವಿತ್ ಶೈನ್' ವಿಶೇಷವಾಗಿ ಮೂಡಿಬರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

    ವೀಕೆಂಡ್ ಅಂದ್ರೆ ಬರಿ ಬೋರು ಅನ್ನೊ ಮಂದಿಯಲ್ಲಿ ಒಂದಿಷ್ಟು ನವೊಲ್ಲಾಸವನ್ನು ತುಂಬುವ ಸಲುವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ವಿಶೇಷ ಮನೋರಂಜನೆಯಾಗಿ ಆರ್ಕೆಸ್ಟ್ರಾ, ಡಾನ್ಸ್, ವಿವಿಧ ಆಟಗಳು, ಬಂಪರ್ ಬಹುಮಾನ, ಶುಚಿ ರುಚಿಯಾದ ಖಾದ್ಯ ಎಲ್ಲವೂ ಇರಲಿದೆ. ಕೇವಲ 500ರೂ ಪ್ರವೇಶ ಶುಲ್ಕವಿದ್ದು ಗ್ಯಾರೆಂಟಿ ಮನೋರಂಜನೆಯ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. 9342519900, 7760225432, djranju2011@gmail.com