ʼಪ್ರಜ್ಞಾʼ ರಾಜ್ಯಮಟ್ಟದ ಉತ್ಸವದಲ್ಲಿ ಐಎಂಜೆಐಎಸ್‌ಸಿ ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪೂರ್ಣಪ್ರಜ್ಞ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ಅಂತರ-ಕಾಲೇಜು ಉತ್ಸವ “ಪ್ರಜ್ಞಾ”ದಲ್ಲಿ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಗಳು ಅಗ್ರ ಸ್ಥಾನಗಳನ್ನು ಪಡೆದು ಮಿಂಚಿದರು.

ಗಮನಾರ್ಹ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದ ದ್ವಿತೀಯ ಬಿಸಿಎ ವಿದ್ಯಾರ್ಥಿನಿ ರಮಿತಾ ಅವರು ಸ್ಥಳದಲ್ಲೇ ನೀಡಿದ "ಕಾಳಿಂಗ ಮರ್ದನ" ವಿಷಯಕ್ಕೆ ಪೆನ್ಸಿಲ್ ಸ್ಕೆಚ್ನಲ್ಲಿ ಪ್ರಥಮ ಬಹುಮಾನ ಪಡೆದರೆ, ತೃತೀಯ ಬಿಸಿಎ ವಿದ್ಯಾರ್ಥಿನಿ ಸನ್ನಿಧಿ ಪಿ. ವೈ. ಕನ್ನಡ ಕ್ರಾಸ್ವರ್ಡ್ನಲ್ಲಿ ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ರಾಜ್ಯದ ವಿವಿಧ  ಕಾಲೇಜುಗಳು ಉತ್ಸವದಲ್ಲಿ ಭಾಗವಹಿಸಿದ್ದವು. ವಿಜೇತರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಬೋಧಕವರ್ಗ ಅಭಿನಂದನೆಗಳನ್ನು ಸಲ್ಲಿಸಿದರು.