ಕೋಟ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಸಾಲಿಗ್ರಾಮದಲ್ಲಿ ಸಂಭವಿಸಿದೆ.
ಕೊರವಾಡಿ ನಿವಾಸಿ ಪ್ರಕಾಶ್ ಮೊಗವೀರ (46) ಮೃತ ವ್ಯಕ್ತಿ.
ಟೈಲ್ಸ್ ವರ್ಕ್ಸ್ ನಡೆಸುತ್ತಿದ್ದ ಅವರು ತೆಕ್ಕಟ್ಟೆಯಿಂದ ಬ್ರಹ್ಮಾವರ ಕಡೆಗೆ ಸಂಚರಿಸುತ್ತಿದ್ದ ಬೈಕ್ಗೆ ಹಿಂದಿನಿಂದ ಬರುತ್ತಿದ್ದ ಕಾರು ಸಾಲಿಗ್ರಾಮ ಕಾರ್ಕಡ ತಿರುವಿನ ಸಮೀಪ ಡಿಕ್ಕಿಯಾಗಿತ್ತು. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತರು ಅವಿವಾಹಿತರಾಗಿದ್ದ ತಂದೆ, ತಾಯಿಯನ್ನು ಅಗಲಿದ್ದಾರೆ.
ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
