ಕುಂದಾಪುರ: ಸ್ಪಂದನ ಯುವಕ ಸಂಘದಿಂದ ರಕ್ತದಾನ ಶಿಬಿರ


ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಗುಜ್ಜಾಡಿ ಸ್ಪಂದನ ಯುವಕ ಸಂಘ ಮಂಕಿ ಇವರಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಘಟಕ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಮಂಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಜರಗಿತು. 

ಕಾರ್ಯಕ್ರಮವನ್ನು ಡಾ. ಮಧುಕರ್ ದೇವಾಡಿಗ ಅವರು ಉದ್ಘಾಟಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ರೆಡ್ ಕ್ರಾಸ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಅಕ್ಷಯ್ ಮಂಕಿ ಸ್ವಾಗತಿಸಿ, ಕಿಶೋರ್ ದೇವಾಡಿಗ ವಂದಿಸಿದರು.