ಬೈಂದೂರು: ರೋಟರಿ ಕ್ಲಬ್ ಬೈಂದೂರು ಇದರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಹಾಗೂ ಕ್ಲಬ್ನ ಹಿರಿಯ ಸದಸ್ಯರು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಆದ ರಾಜು ಪೂಜಾರಿ ಮತ್ತು ರತಿ ಆರ್ ಪೂಜಾರಿ ಅವರ ವೈವಾಹಿಕ ಜೀವನದ ರಜತ ಮಹೋತ್ಸವವನ್ನು ರೋಟರಿ ಕುಟುಂಬದ ಸದಸ್ಯರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಗೋವಿಂದ ಎಂ .ಅವರು "ಸಂಸಾರದಲ್ಲಿ ಸರಿಗಮಪ" ಎನ್ನುವ ವಿಚಾರದ ಕುರಿತು ವಿಷಯ ಮಂಡಿಸಿದರು. ಕ್ಲಬ್ ನ ಸದಸ್ಯರೆಲ್ಲರೂ ಸೇರಿ ರಾಜು ಪೂಜಾರಿ ದಂಪತಿಗಳಿಗೆ ಸನ್ಮಾನಿಸಿದರು.
ವೇದಿಕೆಯಲ್ಲಿ ಕೃಷ್ಣಪ್ಪ ಶೆಟ್ಟಿ, ಥೀಯೋದರ್ ಫೆರ್ನಾಂಡಿಸ್, ಪ್ರಸಾದ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಅಧ್ಯಕ್ಷರಾದ ಸುಬ್ರಮಣ್ಯ ಜಿ. ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಧನ್ಯವಾದ ಸಮರ್ಪಿಸಿದರು.
