ಕುಂದಾಪುರ: ಹಿರಿಯ ನಾಗರಿಕರ ಸಂಘ ಬ್ರಹ್ಮಾವರ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಬ್ರಹ್ಮಾವರ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ರೋಟರಿ ಕ್ಲಬ್, ಬ್ರಹ್ಮಾವರ ಇವರ ಸ೦ಯುಕ್ತ ಆಶ್ರಯದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ್ಯಕ್ರಮವು ಬ್ರಹ್ಮಾವರ ಹಿರಿಯ ನಾಗರಿಕರ ಸಂಘ ಇದರ ಸಭಾಂಗಣದಲ್ಲಿ ನಡೆಯಿತು.
ಬ್ರಹ್ಮಾವರ ರೋಟರಿ ಕ್ಲಬ್ ಸತೀಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನುದೇಶಿಸಿ ಮಾತನಾಡಿದರು. ಈಶ್ವರ್ ಮಲ್ಪೆ ಟೀಮ್ ಸಂಚಾಲಕರಾದ ಲವ ಬಂಗೇರ ಅವರು ಪ್ರಸ್ತಾವನೆ ಗೆಯ್ದು ಎಲ್ಲರನ್ನೂ ಸ್ವಾಗತಿಸಿದರು.
ಉಡುಪಿ ಶ್ರವಣ ತಜ್ಞೆ ಡಾಕ್ಟರ್ ಅಂಕಿತ, ಬ್ರಹ್ಮಾವರ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯಸಭಾಪತಿ ಉದಯ್ ಕುಮಾರ್ ಶೆಟ್ಟಿ, ಬ್ರಹ್ಮಾವರ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಹಾಗೂ ಭಾಸ್ಕರ್ ರೈ, ಜೊತೆ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ರಿಕ್ಸನ್ ರೋಯ್, ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದು ಶಿಬಿರವನ್ನ ನಡೆಸುವಲ್ಲಿ ಸಹಕರಿಸಿದರು.
ಒಟ್ಟು 25 ಮಂದಿ ಈ ಶಿಬಿರದಲ್ಲಿ ಪಾಲ್ಗೊಂಡು, 8 ಮಂದಿ ಅದರ ಉಪಯೋಗವನ್ನು ಪಡೆದುಕೊಂಡರು. ಸಹಕರಿಸಿದ ಎಲ್ಲರಿಗೂ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾದ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಅವರು ವಂದಿಸಿದರು.
