ಬೈಂದೂರು: ಬೈಂದೂರು ಪೊಲೀಸರು ಅಂದರ್-ಬಹರ್ ಇಸ್ಪೀಟ್ ಜುಗಾರಿ ನಿರತ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಪ್ಪುಂದ ಗ್ರಾಮದ ಪೂರ್ಣಿಮಾ ಬಾರ್ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಅಂದರ್- ಬಹರ್ ಇಸ್ಪೀಟ್ ಜುಗಾರಿ ನಡೆಯುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಪಿಎಸ್ಐ ಸುನಿಲ್ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿ, ಆರೋಪಿಗಳಾದ ಬಿಜೂರಿನ ವಿಶ್ವನಾಥ ದೇವಾಡಿಗ (35), ಉಪ್ಪುಂದದ ಅಣ್ಣಪ್ಪ ಖಾರ್ವಿ (56), ಉಪ್ಪುಂದದ ಸುಬ್ರಹ್ಮಣ್ಯ ಖಾರ್ವಿ, ಉಪ್ಪುಂದದ ಕೃಷ್ಣ ಖಾರ್ವಿ (38), ಉಪ್ಪುಂದದ ಸುಬ್ರಹ್ಮಣ್ಯ ಖಾರ್ವಿ (38) ಉಪ್ಪುಂದ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅವರಿಂದ ನಗದು 2,650 ರೂ. ಮತ್ತು52 ಇಸ್ಪೀಟ್ ಎಲೆಗಳು ಹಾಗೂ ಸಿಮೆಂಟ್ ಚೀಲ ಸ್ವಾಧಿನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
