ಅವರು ಮುಂದಿನ ಮೊಕ್ಕಾಂಗೆ ಪ್ರಯಾಣ ಬೆಳೆಸುವ ಮುನ್ನ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಹರಿನಾಮ ಸಂಕೀರ್ತನೆ, ದೇವರ ನಾಮಸ್ಮರಣೆ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ದೇವರಿಗೆ ಸಂಬಂಧಪಟ್ಟ ಯಾವುದೇ ಕಾರ್ಯ ಮಾಡಿದರೂ ಅದು ವ್ಯರ್ಥವಾಗುವುದಿಲ್ಲ. ಮಾಡಿದ ಎಲ್ಲಾ ಕಾರ್ಯಗಳಿಗೆ ದೇವರು ಫಲ ನೀಡುತ್ತಾನೆ. ಅಧಿಕ ಮಾಸದಲ್ಲಿ ಸಣ್ಣ ದೇವರ ಕೆಲಸ ಮಾಡಿದರೂ ಅಕ್ಷಯ ಫಲ ಪ್ರಾಪ್ತಿಯಾಗುತ್ತದೆ. ಸತ್ಕರ್ಮ ಮಾಡಿದರೆ, ದೇವರ ನಾಮಸ್ಮರಣೆ ಮಾಡಿದರೆ, ದೇವರನ್ನು ಸಂಪ್ರೀತಿಗೊಳಿಸುವ ಕಾರ್ಯ ಮಾಡಿದರೆ ನಮಗೆ ಜೀವನದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆಯಾಗುದಿಲ್ಲ ಎಂದು ಅವರು ಆಶೀರ್ವದಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಸದಾಶಿವ ನಾಯಕ್ ಮತ್ತು ಜಿ. ವೆಂಕಟೇಶ ನಾಯಕ್ ಶ್ರೀಗಳ ಪಾದಪೂಜೆ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಊರಿನ ಹತ್ತು ಸಮಸ್ತರು, ಸಮಾಜ ಬಾಂಧವರು ಮೊದಲಾದವರು ಉಪಸ್ಥಿತರಿದ್ದರು.
