ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಕುಲಪತಿ ಪಿ.ಎಲ್. ಧರ್ಮ ಮತ್ತು ಕುಲಸಚಿವ ಡಾ. ಗಣೇಶ್ ಸಂಜೀವ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಾಲೇಜಿನ ಪ್ರಥಮ ಪ್ರಕಟಣೆಯಾದ “ವಿದ್ಯಾವೀಣೆ”ಯಲ್ಲಿ ಕವಿತೆ, ಕಥೆ, ಪ್ರಬಂಧ, ವಿಮರ್ಶೆ, ಸಂದರ್ಶನ, ಗ್ರಾಮ ಅಧ್ಯಯನ, ಜಾನಪದ, ರೂಢಿ ಸಂಪ್ರದಾಯ ಆಚರಣೆಗಳ ಕುರಿತ ವಿವಿಧ ಲೇಖನಗಳು, ರೇಖಾಚಿತ್ರ, ಕಲಾಕೃತಿಗಳು ಹಾಗೂ ಸಂಸ್ಥೆಯ ವಿವಿಧ ಚಟುವಟಿಕೆಗಳು ಮತ್ತು ಸಾಧನೆಗಳ ಕುರಿತಾದ ವರದಿಗಳು ಪ್ರಕಟವಾಗಿದ್ದವು. 9 ಭಾಷೆಗಳಲ್ಲಿ ಮೂಡಿಬಂದ ವೈವಿಧ್ಯಮಯ ಸಾಹಿತ್ಯ, ಉತ್ಕೃಷ್ಟ ವಿಷಯವಸ್ತು ಹಾಗೂ ವಿಶಿಷ್ಟ ನಿರೂಪಣಾ ಶೈಲಿಯಿಂದಾಗಿ ಪತ್ರಿಕೆಗೆ ಈ ಮಾನ್ಯತೆ ಲಭಿಸಿದೆ.
ಸಂಪಾದಕ ಮಂಡಳಿ, ಅಧ್ಯಾಪಕ ವೃಂದ, ಲೇಖನ, ಕವಿತೆ, ಕಲಾಕೃತಿಗಳನ್ನು ನೀಡಿದ ವಿದ್ಯಾರ್ಥಿಗಳು ಹಾಗೂ ಪ್ರಕಟಣೆಗೆ ಸಹಕರಿಸಿದ ಎಲ್ಲರನ್ನೂ ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ. ಪತ್ರಿಕೆಯ ಮುಖಪುಟ ಚಿತ್ರ ಮತ್ತು ವಿನ್ಯಾಸವನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸಿರುವುದು ವಿಶೇಷ ಆಕರ್ಷಣೆಯಾಗಿದೆ.
ಪ್ರಥಮ ಪ್ರಯತ್ನದಲ್ಲೇ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮನ್ನಣೆ ಪಡೆದಿರುವುದು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಕಾಲೇಜಿನ ಗುಣಮಟ್ಟದ ಮಾರ್ಗದರ್ಶನಕ್ಕೆ ಸಾಕ್ಷಿಯಾಗಿದೆ.
