ಕೋಡಿ ತಲೆ ಪಂಚಶಕ್ತಿ ಸಂಘದಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪಂಚಶಕ್ತಿ ಸಂಘ ಕೋಡಿತಲೆ ಹೊಸಬೆಂಗ್ರೆ ಇದರ 24ನೇ ವಾರ್ಷಿಕೋತ್ಸವದ ಪ್ರಯುಕ್ತ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಡಿತಲೆಯಲ್ಲಿ ಆಯೋಜಿಸಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಮನೋರೋಗ ತಜ್ಞರಾದ ಡಾ. ಕೆ.ಎಸ್ ಕಾರಂತ್ ಆರೋಗ್ಯ ಶಿಬಿರಗಳನ್ನು ನಡಿಸುವುದು ಮಾತ್ರವಲ್ಲದೆ ಅದು ಸರಿಯಾದ ವ್ಯಕ್ತಿಗಳಿಗೆ ತಲುಪಿಸುವಂತಹ ಆಗಬೇಕು ಹಾಗೂ ಅದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವುದರ ಮೂಲಕ ಉಚಿತ ಶಿಬಿರಗಳು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಕೋಡಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರತ್ನ ಟೀಚರ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಮ ಖಾರ್ವಿ, ಹಿರಿಯರಾದ ಗಿರಿಜ ಪೂಜಾರ್ತಿ, ಪ್ರಸಾದ್ ನೇತ್ರಾಲಯದ ಸಂಪರ್ಕಾಧಿಕಾರಿ ಗಣೇಶ್, ಅಧ್ಯಾಪಕಿ ಹೇಮಾ, ಸುಪ್ರೀತ, ಪಂಚಶಕ್ತಿ ಸಂಘದ ಅಧ್ಯಕ್ಷರಾದ ಪ್ರವೀಣ್ ಖಾರ್ವಿ ಗೌರವಾಧ್ಯಕ್ಷರಾದ ಮಡಿ ವಿಶ್ವನಾಥ ಖಾರ್ವಿ, ಕಾರ್ಯದರ್ಶಿ ಸಂದೀಪ್ s ಖಾರ್ವಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮಣ ಖಾರ್ವಿ, ಸಂದೇಶ್, ಅನಿಲ, ಸಂದೀಪ, ವಿಕೇಶ್ ಬಂಗೇರ, ದಿನೇಶ್, ಪ್ರವೀಣ್, ವಿಜಯ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಊರಿನ ಹಲವಾರು ಮಂದಿ ಕಣ್ಣಿನ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡರು.