ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಪ್ರಾಂಶುಪಾಲೆ ಡಾ| ವಿದ್ಯಾ ರಾಜ್ ಸಾಲಿಯಾನ್ ಕನ್ನಡವನ್ನು ಅನ್ನದ ಭಾಷೆಯಾಗಿ ರೂಪಿಸುವಲ್ಲಿ ಸೋತಿರುವ ನಾವು ಅನ್ಯ ಭಾಷೆಯನ್ನು ಬಹಳ ವೇಗವಾಗಿ ಒಪ್ಪಿಕೊಳ್ಳುವ ಸ್ಥಿತಿ ಬಂದಿದೆ, ಕನ್ನಡವನ್ನು ಬಳಸಿ ಉಳಿಸುವ ಎನ್ನುವ ಮಾತನಾಡಿದರು.
ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಕಥೆ ಕವನಗಳನ್ನು ರಚಿಸುವ ಸುಲಭ ಕ್ರಮವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಅವರು ತಮ್ಮ ಜೀವನದ ಏರಿಳಿತವನ್ನೇ ಸಾಹಿತ್ಯ ರೂಪದಲ್ಲಿ ವಿದ್ಯಾರ್ಥಿಗಳಿಗೆ ಕಟ್ಟಿಕೊಟ್ಟರು. ಗುಂಡ್ಮಿ ರಾಮಚಂದ್ರ ಐತಾಳ್ ಅವರು ಕಥೆ ಕವನಗಳನ್ನು ಹಾಡಿ ಭಾವಾಭಿನಯದ ಮೂಲಕ ಸಾಹಿತ್ಯದ ಮೆರುಗನ್ನ ವಿವರಿಸಿದರು.
ಚಿತ್ರನಟ ಪುನೀತ್ ಶೆಟ್ಟಿ ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ಸಾಹಿತ್ಯದ ಅವಶ್ಯಕತೆ ತಿಳಿಸಿದರು. ನರಸಿಂಹ ತುಂಗ ಮತ್ತು ನಾಗರತ್ನ ಜಿ. ಅವರು ಯಕ್ಷಗಾನದಲ್ಲಿ ಬರುವ ದ್ವಂದ್ವಾರ್ಥ ಪದಗಳ ಅರ್ಥಗಳನ್ನು ವಿವರಿಸುತ್ತಾ ಪ್ರಸಂಗದ ಪಾತ್ರಗಳನ್ನು ಅಭಿನಯಿಸಿ ತೋರಿಸಿದರು.ಅಚ್ಚುತ ಪೂಜಾರಿ ಅವರು ಕನ್ನಡ ಗೀತೆಗಳನ್ನು ಹಾಡಿದರು. ಮಣಿಪಾಲ್ ನರಸಿಂಹಮೂರ್ತಿಯವರು ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ರಾಜ್ಯದಲ್ಲಿ ಮಾದರಿಯಾಗಿ ಬೆಳೆದಿದೆ ಎಂದರು.
ಪ್ರಾಧ್ಯಾಪಕ ಮೆಲ್ವಿನ್ ಅವರು ನಾವು ಕೊಡುವ ಅನ್ನ ರಕ್ಷಣೆ ಮತ್ತು ಜ್ಞಾನ ದೇಶದ ಇತಿಹಾಸವನ್ನು ಬದಲಿಸುತ್ತದೆ ಎನ್ನುತ್ತಾ ಕಾರ್ಯಕ್ರಮಕ್ಕೆ ಧನ್ಯವಾದ ನೀಡಿದರು.

