ತೆಕ್ಕಟ್ಟೆ ಗ್ರಾಮಪಂಚಾಯತ್, ಎಸ್ ಎಲ್ ಆರ್ ಎಂ ಘಟಕ, ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ, ತೆಕ್ಕಟ್ಟೆ ಫ್ರೆಂಡ್ಸ್, ಜೈ ಭಾರತ್ ತೆಕ್ಕಟ್ಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಅಭಿಯಾನ ಜರಗಿತು.
ತೆಕ್ಕಟ್ಟೆ ಪಂಚಾಯತ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಮೂಲಕ ತೆಕ್ಕಟ್ಟೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಚಾಲನೆ ನೀಡಿದರು.
ಸುಮಾರು 100ಕ್ಕೂ ಅಧಿಕ ತ್ಯಾಜ್ಯವನ್ನು ಹೆದ್ದಾರಿಯಿಂದ ತೆರವುಗೊಳಿಸಲಾಯಿತು.ಅಲ್ಲದೆ ಈ ವೇಳೆ ಪಿಡಿಓ ಸಂತೋಷ್ ಕುಮಾರ್ ಮಾತನಾಡಿ ಸ್ವಚ್ಛತೆಯ ಬಗ್ಗೆ ಗ್ರಾಮದ ಜನರಲ್ಲಿ ಅರಿವಿ ಅತ್ಯಗತ್ಯ,ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸುವುದು ಸೇರಿದಂತೆ ಸ್ವಚ್ಛ ಗ್ರಾಮ ಪರಿಕಲ್ಪನೆಯ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಮಾಜಿ ಅಧ್ಯಕ್ಷೆ ಶೋಭಾ ಶೆಟ್ಟಿ, ವಿಜಯ ಭಂಢಾರಿ, ನಿವೃತ್ತ ಯೋಧರಾದ ರವಿ ಶೆಟ್ಟಿ, ಪಂಚವರ್ಣ ಯುವಕಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ತೆಕ್ಕಟ್ಟೆ ಫ್ರೆಂಡ್ಸ್ ಮುಖ್ಯಸ್ಥ ಪ್ರಕಾಶ್ ಶೆಟ್ಟಿ, ತೆಕ್ಕಟ್ಟೆ ಪಂಚಾಯತ್ ಎಸ್ಎಲ್ಆರ್ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ, ಜೈ ಭಾರತ್ ಪ್ರಮುಖರಾದ ಸಂತೋಷ್ ಪೂಜಾರಿ, ಕುಂದಾಪುರ ತಾಲೂಕು ಪಂಚಾಯತ್ನ ಉಮೇಶ್ ಪೂಜಾರಿ, ಸಂದೀಪ್, ಗ್ರಾಮಂಚಾಯತ್ ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
