ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಕೂಟಿಗೆ ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಗಣತಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಮೃತಪಟ್ಟ ಘಟನೆ ಗುರುವಾರ ಸಂಜೆ ಸಿದ್ದಾಪುರ-ಶಿರಸಿ ಮುಖ್ಯ ರಸ್ತೆಯ ಮಳವತ್ತಿ ಬಳಿ ಸಂಭವಿಸಿದೆ.
ಕುಂದಾಪುರ: ಸ್ಕೂಟಿಗೆ ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಗಣತಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಮೃತಪಟ್ಟ ಘಟನೆ ಗುರುವಾರ ಸಂಜೆ ಸಿದ್ದಾಪುರ-ಶಿರಸಿ ಮುಖ್ಯ ರಸ್ತೆಯ ಮಳವತ್ತಿ ಬಳಿ ಸಂಭವಿಸಿದೆ.
ಪೂರ್ಣಿಮಾ ಗಣಪತಿ ಭಟ್ಟ (42) ಮೃತ ದುರ್ದೈವಿ.
ಕೋಲಸಿರ್ಸಿ ಕ್ರಾಸ್ ಬಳಿಯ ತಮ್ಮ ಮನೆಯಿಂದ ಪಟ್ಟಣಕ್ಕೆ ಸ್ಕೂಟಿಯಲ್ಲಿ ಬರುವ ವೇಳೆ ಈ ಘಟನೆ ನಡೆದಿದ್ದು, ಕೂಡಲೇ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಪೂರ್ಣಿಮಾ ಭಟ್ಟ ಪತಿ ಬಿದ್ರಕಾನ್ ಪ್ರೌಢಶಾಲೆ' ಮುಖ್ಯಾಧ್ಯಾಪಕ ಜನಾರ್ದನ ಹಾಗೂ ಮಗನನ್ನು ಅಗಲಿದ್ದಾರೆ.